header

ಪರಿಶಿಷ್ಟ ಜಾತಿ ಉಪಯೋಜನೆ

ಪರಿಚಯ
ಕರ್ನಾಟಕ ರಾಜ್ಯವು ಪರಿಶಿಷ್ಟ ಜಾತಿ ಉಪ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಒಂದು ಕ್ರಾಂತಿಕಾರಿ “ಕರ್ನಾಟಕ ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ (ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ಅಧಿನಿಯಮ 2013” ರ ಕಾಯಿದೆಯನ್ನು ಜಾರಿಗೊಳಿಸಿದ ಪ್ರಥಮ ರಾಜ್ಯವಾಗಿರುತ್ತದೆ. ಈ ಅಧಿನಿಯಮದ ಮೂಲಕ ಕ್ಷಿಪ್ರವಾಗಿ ಪರಿಶಿಷ್ಟ ಜಾತಿಯವರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ. ಈ ಕಾಯಿದೆಯ ಮೂಲಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಜನಸಂಖ್ಯೆಯ ಪ್ರಮಾಣಕ್ಕನುಸಾರವಾಗಿ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಗೆ ರಾಜ್ಯ ಯೋಜನಾ ವೆಚ್ಚದ ಒಂದು ಭಾಗವನ್ನು ಮೀಸಲಿಡುವುದಕ್ಕಾಗಿ ಹಾಗೂ ಉಪಯೋಜನೆಯ ತಯಾರಿಗೆ, ಅನುಷ್ಠಾನ ಮತ್ತು ಮೇಲ್ವಿಚಾರಣೆ ಮಾಡಲು ಸಾಂಸ್ಥಿಕ ವ್ಯವಸ್ಥೆಯನ್ನು ಸಜ್ಜುಗೊಳಿಸಲು ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಅದಕ್ಕೆ ಪ್ರಾಸಂಗಿಕವಾದ ವಿಷಯಗಳಿಗೆ ಉಪ-ಬಂಧ ಕಲ್ಪಿಸುವುದಾಗಿದೆ.
ಈ ಉಪಯೋಜನೆಯಲ್ಲಿ ರಾಜ್ಯದ ಒಟ್ಟು ಆಯವ್ಯಯದ ಶೇ 17.15 & ಶೇ 6.95 ರಷ್ಟು ಆಯವ್ಯಯವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಮೀಸಲಿರಿಸಲಾಗಿದೆ. ಮುಖ್ಯವಾಗಿ ಈ ಅನುದಾನವನ್ನು ಆದ್ಯತಾ ವಲಯಗಳಾದ ಶಿಕ್ಷಣ, ವಸತಿ ಮತ್ತು ನೀರಾವರಿ ಯೋಜನೆಗಳಿಗೆ ಬಳಸಲಾಗುತ್ತದೆ, ಈ ಜನಾಂಗದ ಸರ್ವತೋಮುಖ ಆರ್ಥಿಕತೆಯನ್ನು ಮೇಲೆತ್ತಲು ಮತ್ತು ಮೂಲಭೂತ ಸೌಕರ್ಯಗಳನ್ನು ಅಭಿವೃದ್ಥಿ ಪಡಿಸಲು 2016-17 ರಲ್ಲಿ ಈ ಕೆಳಕಂಡ ಅಭಿವೃದ್ಧಿ ಇಲಾಖೆಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುತ್ತದೆ.
ಕೃಷಿ
ತೋಟಗಾರಿಗೆ
ರೇಷ್ಮೆ
ಪಶು ಸಂಗೋಪನೆ
ಮೀನುಗಾರಿಕೆ
ಸಾರಿಗೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಅರಣ್ಯ
ಸಹಕಾರ
ಪರಿಶಿಷ್ಟ ಜಾತಿ ಕಲ್ಯಾಣ
ಪರಿಶಿಷ್ಟ ಪಂಗಡಗಳ ಕಲ್ಯಾಣ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ವಾರ್ತಾ
ಪ್ರವಾಸೋದ್ಯಮ
ಯುವಜನ ಸೇವೆ
ಕಂದಾಯ
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ
ವಸತಿ
ಉನ್ನತ ಶಿಕ್ಷಣ
ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ
ಕೈಮಗ್ಗ ಮತ್ತು ಜವಳಿ
ಭಾರಿ ಮತ್ತು ಮಧ್ಯಮ ಕೈಗಾರಿಕೆ
ಸಣ್ಣ ಕೈಗಾರಿಕೆ
ನಗರಾಭಿವೃದ್ಧಿ
ಲೋಕೋಪಯೋಗಿ
ಭಾರಿ ನೀರಾವರಿ
ಸಣ್ಣ ನೀರಾವರಿ
ವೈದ್ಯಕೀಯ ಶಿಕ್ಷಣ
ಆರೋಗ್ಯ
ಕಾರ್ಮಿಕ
ಇಂಧನ
ಕನ್ನಡ ಮತ್ತು ಸಂಸ್ಕøತಿ
ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ
ಕಾನೂನು
ಪರಿಶಿಷ್ಟ ಜಾತಿ ಉಪ ಯೋಜನೆಯಲ್ಲಿ 2 ವಿಧದಲ್ಲಿ ಸಂಪನ್ಮೂಲಗಳನ್ನು ಒದಗಿಸಲಾಗಿತ್ತಿದೆ. ಮೊದಲನೆಯದಾಗಿ, ಪರಿಶಿಷ್ಟ ಜಾತಿ/ಪಂಗಡದ ವ್ಯಕ್ತಿ/ಕುಟುಂಬಗಳಿಗೆ ನೇರ ಸೌಲಭ್ಯಗಳನ್ನು ಒದಗಿಸಿ ಆರ್ಥಿಕಾಭಿವೃದ್ಧಿಗೊಳಿಸುವುದು. ಎರಡನೆಯದಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ವಾಸ್ತವ್ಯವಿರುವ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ಮತ್ತು ಇತರೆ ಸೌಲಭ್ಯ, ಸೇವೆಗಳನ್ನು ಕಲ್ಪಿಸುವುದು. 2016 ರ ಮಾರ್ಚ್ ಅಂತ್ಯಕ್ಕೆ ಸುಮಾರು 5661000 ಪರಿಶಿಷ್ಟ ಜಾತಿ ಫಲಾನುಭವಿಗಳು ವಿವಿಧ ಕಾರ್ಯಕ್ರಮಗಳಡಿ ಪ್ರಯೋಜನ ಪಡೆದಿರುತ್ತಾರೆ.
ರಾಜ್ಯ ಮಟ್ಟದಲ್ಲಿ ನೋಡಲ್ ಏಜೆನ್ಸಿಯು ನೋಡಲ್ ಇಲಾಖೆಯ ಸಹಾಯದೊಂದಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಪೂರಕವಾಗಿ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಗಳ ಅಡಿಯಲ್ಲಿ ಅನುಷ್ಟಾನ ಮಾಡುವ ಕಾರ್ಯಕ್ರಮಗಳ ಸೇರ್ಪಡೆ ಮಾರ್ಪಾಡು ಮತ್ತು ಕೈಬಿಡುವ ಕುರಿತು ಸಂಬಂಧಿಸಿದ ಅಭಿವೃದ್ಧಿ ಇಲಾಖೆಗಳ ಕ್ರಿಯಾ ಯೋಜನೆಯಲ್ಲಿ ಅಳವಡಿಸಿ ಅನುಮೋದನೆಗೆ ರಾಜ್ಯ ಕೌನ್ಸಿಲ್‍ನಲ್ಲಿ ಮಂಡಿಸುವುದು. ರಾಜ್ಯ ಮಟ್ಟದ ನೋಡಲ್ ಏಜೆನ್ಸಿಯು ಇಲಾಖೆಯ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಸಹಾಯಕ ಘಟಕವನ್ನು ಹೊಂದಿದ್ದು, ಇದರ ಮೂಲಕ ಉಪ ಯೋಜನೆಯ ಕಾರ್ಯಕ್ರಮಗಳನ್ನು ಅನುಷ್ಟಾನ ಮಾಡಲಾಗುತ್ತದೆ. ರಾಜ್ಯ ಕೌನ್ಸಿಲ್‍ನಲ್ಲಿ ಅನುಮೋದನೆಗೊಂಡ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಬುಡಕಟ್ಟುಗಳ ಉಪಯೋಜನೆಯ ವಾರ್ಷಿಕ ಯೋಜನೆಯಗಳ ಅನುಷ್ಟಾನಗೊಳಿಸಲು ಬೇಕಾದ ಬೇಡಿಕೆಯನ್ನು ಇಲಾಖೆಯ ಸಂಬಂಧಿಸಿದ ಲೆಕ್ಕಶೀರ್ಷಿಕೆಗಳಲ್ಲಿ ಒದಗಿಸಲಾಗುತ್ತದೆ. “ಕರ್ನಾಟಕ ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ (ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ಅಧಿನಿಯಮ 2013” ರ ಕಾಯಿದೆಯಂತೆ, ಆಯವ್ಯಯದಲ್ಲಿ ನಿಗಧಿಪಡಿಸಿದ ಅನುದಾನವನ್ನು ವಿಧಾನ ಮಂಡಲದಲ್ಲಿ ಅನುಮೋದಿಸಿದ ನಂತರ ಆಯವ್ಯಯವನ್ನು ಸಂಬಂಧಿಸಿದ ಇಲಾಖೆಗಳಿಗೆ ಬಿಡುಗಡೆಗೊಳಿಸಲಾಗುವುದು. ಅದೇ ರೀತಿ ಇಲಾಖೆಯು ಸಾಧಿಸಿದ ಪ್ರಗತಿ ಮತ್ತು ಬಾಕಿ ಉಳಿಸಲಾದ ಅನುದಾನದ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವ ಕುರಿತು ವಿಧಾನ ಮಂಡಲದ ಮುಂದಿರಿಸಲಾಗುವುದು.