header

ಇತರೆ ಯೋಜನೆಗಳು

ಶೀರ್ಷಿಕೆ ಅಸ್ಪøಶ್ಯತಾ ನಿವಾರಣೆ – ಅಂತರ ಜಾತಿ ವಿವಾಹಿತ ದಂಪತಿಗಳಿಗೆ ಪ್ರೋತ್ಸಾಹ ಧನ.
ಸಂಕ್ಷಿಪ್ತ ವಿವರಣೆ ರಾಜ್ಯ ಸರ್ಕಾರವು ಅಸ್ಪøಶ್ಯತೆ ನಿವಾರಣೆ ಮಾಡಲು ವಿವಿಧ ಯೋಜನೆಗಳನ್ನು ಪ್ರಚಾರ ಮಾಡಿ ಶೈಕ್ಷಣಿಕ ಯೋಜನೆಗಳನ್ನು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮತ್ತು ಒದಗಿಸಲು ಪರಿಶಿಷ್ಟ ಜಾತಿಯವರಿಗೆ ಅವಕಾಶ ಒದಗಿಸಿ ಮತ್ತು ಅವರ ಆರ್ಥಿಕ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಗಳಲ್ಲಿ ಅಂತರಜಾತಿ ವಿವಾಹಕ್ಕೆ ಪ್ರೋತ್ಸಾಹಧನವನ್ನು ನೀಡುತ್ತಿರುವುದು ಒಂದು ಪ್ರಮುಖ ಯೋಜನೆಯಾಗಿದೆ.
ಯೋಜನೆ ಅಂತರಜಾತಿ ವಿವಾಹಿತ ದಂಪತಿಗಳಲ್ಲಿ ಪರಿಶಿಷ್ಟ ಜಾತಿಯ ಪುರುಷರು ಅನ್ಯ ಜಾತಿಯ ಹಿಂದೂ ಧರ್ಮದ ಹೆಂಗಸರನ್ನು ವಿವಾಹವಾದಲ್ಲಿ ಅಂತಹ ದಂಪತಿಗಳಿಗೆ ರೂ.2,00,000/- ಗಳ ಪ್ರೋತ್ಸಾಹಧನ ಹಾಗೂ ಪರಿಶಿಷ್ಟ ಜಾತಿಯ ಸ್ತ್ರೀಯರು ಅನ್ಯ ಜಾತಿಯ ಹಿಂದೂ ಧರ್ಮದ ಪುರುಷರನ್ನು ವಿವಾಹವಾದಲ್ಲಿ ರೂ.3,00,000/-ಗಳ ಪ್ರೋತ್ಸಾಹಧನವನ್ನು 2 ವರ್ಷಗಳಲ್ಲಿ ನೀಡಲಾಗುತ್ತದೆ. ಸದರಿ ಕಾರ್ಯಕ್ರಮ ಕೇಂದ್ರ ಪುರಸ್ಕøತ ಯೋಜನೆಯಾಗಿದ್ದು 50:50 ಅನುಪಾತದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಪ್ರೋತ್ಸಾಹಧನವನ್ನು ಭರಿಸಲಾಗುತ್ತಿದೆ.
ಇದು ಕೇಂದ್ರ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ 50:50 ಅನುಪಾತದಲ್ಲಿ ಸಮಾನವಾದ ವೆಚ್ಚವನ್ನು ಭರಿಸುತ್ತಿದೆ.
ಸಹಾಯಕ ನಿರ್ದೇಶಕರು ಗ್ರೇಡ್ -1 ಅರ್ಜಿದಾರರ ಅರ್ಜಿಯನ್ನು ತನಿಖೆ ಮಾಡಿ ಪರಿಗಣಿಸತಕ್ಕದ್ದು ನಂತರ ಅರ್ಜಿ ಮತ್ತು ತನಿಖಾ ವರದಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ರವರು ಒಪ್ಪಿದ ನಂತರ ಕಾನೂನು ಬದ್ಧವಾಗಿ ಸ್ವೀಕರಿಸಿದ ಅರ್ಜಿಯನ್ನು ಸಹಾಯಕ ನಿರ್ದೇಶಕರು ಗ್ರೇಡ್ -1 ರವರು ದಂಪತಿಗಳನ್ನು ನೋಡಿ ತೀರ್ಮಾನಿಸುವುದು.
ಅರ್ಹತೆಗಳು
 1. ಅಂತರಜಾತಿ ವಿವಾಹವಾಗುವ ದಂಪತಿಗಳಲ್ಲಿ ಒಬ್ಬರು ಪರಿಶಿಷ್ಟ ಜಾತಿಯವರಾಗಿದ್ದು, ಸವರ್ಣೀಯರನ್ನು ವಿವಾಹವಾಗಿರಬೇಕು
 2. ಅವರ ವಾರ್ಷಿಕ ಆದಾಯ 50,000/- ರೂ. ಗಳನ್ನು ಮೀರಿರಬಾರದು.
 3. ಈ ಯೋಜನೆಗೆ ಒಳಪಡುವ ದಂಪತಿಗಳು ಕಾನೂನು ಪ್ರಕಾರ ಸಬ್ ರಿಜಿಸ್ಟ್ರಾರ್ ಆಫೀಸ್‍ನಲ್ಲಿ ವಿವಾಹ ನೋಂದಣಿ ಮಾಡಿಸಿಕೊಂಡ ದೃಢೀಕರಣ ಪತ್ರ ಹೊಂದಿರಬೇಕು.
 4. ಅವನು/ಅವಳಿಗೆ 2ನೇ ಮದುವೆಯಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
ದಾಖಲಾತಿಗಳು
 1. ಸಬ್ ರಿಜಿಸ್ಟ್ರಾರ್ ಆಫೀಸ್‍ನಲ್ಲಿ ನೋಂದಾಯಿಸಿದ ದೃಢೀಕೃತ ವಿವಾಹ ಪ್ರಮಾಣ ಪತ್ರ.
 2. ದಂಪತಿಗಳ ಪ್ರತ್ಯೇಕವಾದ ವಾರ್ಷಿಕ ಆದಾಯ ಪ್ರಮಾಣ ಪತ್ರ.
 3. ಸಂಬಂಧಪಟ್ಟ ಪ್ರಾಧಿಕಾರಿಯಿಂದ ಹೊರಡಿಸಲಾದಜಾತಿ ಪ್ರಮಾಣ ಪತ್ರ (ಗಂಡ ಮತ್ತು ಹೆಂಡತಿ ಪ್ರತ್ಯೇಕವಾಗಿ).
 4. ವಿವಾಹವಾದ ದಂಪತಿಗಳ ಜೋಡಿ ಫೋಟೋ.
 5. ಸಂಬಂಧಪಟ್ಟ ಅಧಿಕಾರಿಯಿಂದ ದೃಡೀಕರಿಸಲ್ಪಟ್ಟ ವಾಸಸ್ಥಳದ ಪ್ರಮಾಣ ಪತ್ರ.
ಸಂಪರ್ಕಾಧಿಕಾರಿಗಳು ಅರ್ಹತೆಯುಳ್ಳ ದಂಪತಿಗಳು ಭರ್ತಿ ಮಾಡಲಾದ ಸೂಕ್ತ ದಾಖಲಾತಿಗಳನ್ನು ಸಂಬಂಧಿಸಿದ ತಾಲ್ಲೂಕಿನ ಸಹಾಯಕ ನಿರ್ದೇಶಕರು ಗ್ರೇಡ್ -1/ ಗ್ರೇಡ್-2, ಸಮಾಜ ಕಲ್ಯಾಣ ಇಲಾಖೆ ರವರಿಗೆ ಸಲ್ಲಿಸುವುದು.
ಕಾಲಾವಧಿ ಅರ್ಜಿ ಸ್ವೀಕರಿಸಿದ ಒಂದು ತಿಂಗಳೊಳಗೆ.
ಒಂದು ವೇಳೆ ಅನುಷ್ಟಾನಾಧಿಕಾರಿಗಳು ವಿಳಂಬ ಮಾಡಿದರೆಈ ಕೆಳಕಂಡ ಅಧಿಕಾರಿಗಳನ್ನು ಸಂಪರ್ಕಿಸುವುದು
 1. ಸಂಬಂಧಿಸಿದ ಜಿಲ್ಲೆಗಳ ಜಂಟಿ/ಉಪ ನಿರ್ದೇಶಕರು.
 2. ಸಂಬಂಧಿಸಿದ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್.
 3. ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು.

Back