header

ಸಮನ್ವಯ ವಿಭಾಗ

ಶೀರ್ಷಿಕೆ ಆಡಳಿತ ನ್ಯಾಯಾಧಿಕರಣದಲ್ಲಿ ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ ಶಿಷ್ಯ ವೇತನ ನೀಡುವ ಬಗ್ಗೆ.
ಪರಿಚಯ ರಾಜ್ಯ ಸರ್ಕಾರ ಗಮನಿಸಿರುವುದೇನೆಂದರೆ ಸಾಕಷ್ಟು ಪ್ರಮಾಣದ ಪರಿಶಿಷ್ಟ ಜಾತಿಯ ಕಾನೂನು ಪದವೀಧರರು ಹಣಕಾಸಿನ ಕೊರತೆಯ ಪ್ರಯುಕ್ತ ಈ ವೃತ್ತಿಯನ್ನು ತೆಗೆದುಕೊಳ್ಳುತ್ತಿಲ್ಲ ಆದ ಕಾರಣ ಸರ್ಕಾರವು ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ ಹಣಕಾಸಿನ ಸಹಾಯವನ್ನು ಒದಗಿಸುವುದು ಮತ್ತು ಆಡಳಿತ ನ್ಯಾಯಾಧಿಕರಣದಲ್ಲಿ ತರಬೇತಿ ಪಡೆಯಲು ಸೌಕರ್ಯವನ್ನು ಒದಗಿಸಲು ಪರಿಗಣಿಸಿದೆ.
ಯೋಜನೆ ಆಯ್ಕೆಯಾದ ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ ರೂ.2000 ಗಳ ಶಿಷ್ಯ ವೇತನವನ್ನು ಪ್ರತಿ ಮಾಹೆಗೆ ನೀಡಲಾಗುವುದು ಮತ್ತು ತರಬೇತಿ ಅವಧಿ 4 ವರ್ಷಗಳಾಗಿರುತ್ತವೆ.
 1.ಆಯಾ ಜಿಲ್ಲೆಗಳಲ್ಲಿ ತರಬೇತಿ ನೀಡಲಾಗುವುದು.
 2.ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯು ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಲಾಗುತ್ತಿದೆ. ತರಬೇತಿಯ ಉದ್ದೇಶಕ್ಕಾಗಿ ಅಭ್ಯರ್ಥಿಗಳನ್ನು ಜಿಲ್ಲಾ ಸಾರ್ವಜನಿಕ ಅಭಿಯೋಜಕರಿಗೆ ಸೇರಿಸಲಾಗುವುದು /ಸರ್ಕಾರಿ ವಕೀಲರು
 ಅಥವಾ ಯವುದೇ ವಕೀಲರು 20 ವರ್ಷಗಳಿಗಿಂತಲೂ ಕಡಿಮೆ ಇಲ್ಲದಂತೆ ವೃತ್ತಿಯಲ್ಲಿ ಸೇವೆ ಸಲ್ಲಿಸಿದವರಾಗಿಬೇಕು.
3.ಸಂಬಂಧಿಸಿದ ವಿಶ್ವ ವಿದ್ಯಾಲಯವು ಕಾನೂನು ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ ನಂತರ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಂದ ಸದಸ್ಯ ಕಾರ್ಯದರ್ಶಿಯು ಸಮಿತಿಯ ಅನುಮೋದನೆ ಪಡೆದು ಅರ್ಜಿಗಳನ್ನು ಆಹ್ವಾನಿಸುವುದು. ಅರ್ಜಿ ಆಹ್ವಾನಿಸುವ ಅಧಿಸೂಚನೆಯನ್ನು ಹೆಚ್ಚು ಪ್ರಚಾರ ಮಾಡುವುದು. ಕರ್ನಾಟಕ ಗೆಜೆಟ್‍ನಲ್ಲಿ ಮತ್ತು ದಿನಪತ್ರಿಕೆಗಳಲ್ಲಿ ಪ್ರಕಟಿಸುವುದು. ಜಿಲ್ಲೆಗಳ ಜಿಲ್ಲಾಧಿಕಾರಿಗಳ/ಜಂಟಿ/ಉಪ ನಿರ್ದೇಶಕರುಗಳು, ಸಮಾಜ ಕಲ್ಯಾಣ ಇಲಾಖೆ/ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಚೇರಿಗಳ ಸೂಚನಾ ಫಲಕಗಳಲ್ಲಿ ಅಧಿಸೂಚನೆಯನ್ನು ಪ್ರಕಟಿಸುವುದು.
4.ಗೆಜೆಟ್‍ನಲ್ಲಿ ಪ್ರಕಟಿಸಿದ ತಾರೀಖಿನಿಂದ ಅರ್ಜಿಗಳನ್ನು ಸ್ವೀಕರಿಸುವ ಕೊನೇ ದಿನಾಂಕಕ್ಕೆ ಒಂದು ತಿಂಗಳಾಗಿರುತ್ತದೆ.
5.ಸದಸ್ಯ ಕಾರ್ಯದರ್ಶಿಯು ಸ್ವೀಕರಿಸಿದ ಅರ್ಜಿಗಳಲ್ಲಿ ಮಾಹಿತಿಯು ಅಪರಿಪೂರ್ಣ ವಾಗಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
6.ತರಬೇತಿಯ ಅವಧಿ 4 ವರ್ಷವಾಗಿದ್ದು ಆಯ್ಕೆಯಾದ ಅಭ್ಯರ್ಥಿಗಳು ತರಬೇತಿಯನ್ನು ಮಧ್ಯದಲ್ಲಿ ಬಿಡಕೂಡದು.
7.ರಾಜ್ಯ/ಕೇಂದ್ರ ಸರ್ಕಾರದಲ್ಲಿ ಕೆಲಸಕ್ಕೆ ನೇಮಕವಾದ ಅಭ್ಯರ್ಥಿಗಳು ಸದರಿ ತರಬೇತಿಗೆ ಅರ್ಹರಿರುವುದಿಲ್ಲ.
8.ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ ದಿನಚರಿಯನ್ನು ಅವರ ಹಿರಿಯ ವಕೀಲರಿಂದ ದೃಢೀಕರಿಸಿ ಸಲ್ಲಿಸುವುದು.
ಅರ್ಹತೆ 1.ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕಕ್ಕೆ ಗರಿಷ್ಟ ವಯಸ್ಸು 35 ವರ್ಷಗಳಾಗಿರಬೇಕು.
2.ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಕಾನೂನು ಪದವಿ ಪಡೆದ 2 ವರ್ಷದೊಳಗಾಗಿ ಅರ್ಜಿಯನ್ನು ಹಾಕುವುದು.
3.ಅಭ್ಯರ್ಥಿಗಳು ಬಾರ್ ಕೌನ್ಸಿಲಿಂಗ್‍ನಲ್ಲಿ ಅವರ ಹೆಸರುಗಳನ್ನು ನೋಂದಾಯಿಸುವುದು.
ದಾಖಲೆಗಳು: 1.ಸಕ್ಷಮ ಪ್ರಾಧಿಕಾರದಿಂದ ನಿಗಧಿತ ನಮೂನೆಯಲ್ಲಿ ಜಾತಿ ಪ್ರಮಾಣ ಪತ್ರ ಪಡೆದು ಸಲ್ಲಿಸುವುದು.
2.ಕಾನೂನು ಪದವಿಯ ಪ್ರಮಾಣ ಪತ್ರ
3.ವಯಸ್ಸು ಸಾಬೀತಿಗೆ (ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಅಥವಾ ಶಾಲಾ ವರ್ಗಾವಣೆ ಪತ್ರ ಸಲ್ಲಿಸುವುದು)
ಸಂಪರ್ಕಾಧಿಕಾರಿಗಳು: ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ
ಕಾಲಾವಧಿ ಅರ್ಜಿ ಸ್ವೀಕರಿಸಿದ ಒಂದು ತಿಂಗಳೊಳಗೆ.
ಒಂದು ವೇಳೆ ಅನುಷ್ಟಾನಾಧಿಕಾರಿಗಳು ವಿಳಂಬ ಮಾಡಿದರೆಈ ಕೆಳಕಂಡ ಅಧಿಕಾರಿಗಳನ್ನು ಸಂಪರ್ಕಿಸುವುದು 1. ಸಂಬಂಧಿಸಿದ ಜಿಲ್ಲೆಗಳ ಜಂಟಿ/ಉಪ ನಿರ್ದೇಶಕರು.
2. ಸಂಬಂಧಿಸಿದ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್.
3. ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು.

Back